Wednesday, December 2, 2009

Written on 07/09/2004

ದಿನವೂ ನಡೆಯುವ ದಾರಿಯಲ್ಲಿ,

ಒಂಟಿ ಮನೆಯ ಮುಂದೆ ಸುಂದರ

ರಂಗೋಲಿಯ ಕಂಡು ನಿಂತೆ;

ಅದರ ಎಳೆ ಎಳೆಯಲ್ಲೂ ಪ್ರೀತಿ ತುಂಬಿತ್ತು ,

ವಾತ್ಸಲ್ಯದ ರಂಗು ಮುಸುಕಿತ್ತು,

ಸುತ್ತಮುತ್ತಲೂ ನೋಡಿದೆ;

ಕಿಟಕಿ ಮುಚ್ಚಿತ್ತು !!!

ಮನೆಯೊಡತಿ ಕಾಣುವಳೇ................

ಹೀಗೆ...

ದಿನವೂ ಇದೇ ಪರಿಪಾಠ..

ರಂಗೋಲಿಯ ಸೌಂದರ್ಯ ಸವಿಯುವುದು...

ಒಡತಿಯ ಹುಡುಕುವುದು..

ಯಾರು ಕಾಣಲಿಲ್ಲ...

ಕಾಣಿಸುವುದೂ ಇಲ್ಲವೇನೋ????

ನಿನ್ನೆ.............

ಕಿಟಕಿ ತೆರೆದಿತ್ತು!!!!

ಆದರೆ ,

ರಂಗೋಲಿಯ ಬಣ್ಣ ಕಾಣಲಿಲ್ಲ,

ಗಂಧ ಸೂಸಲಿಲ್ಲ

ಬಹುಶಃ !!???

ಒಡತಿ ಇಲ್ಲವೇನೋ?????

Wednesday, November 25, 2009

A dream waiting to be ful filled...

To the one I love...............
I always wanted to be with you
In your dreams, in your feelings
In the poster lying silently under your pillow,
I wanted to hold your tough hands while
Walking alone on the silently slept road,
I wanted to close my eyes
Sitting Beside you

Going on long drives
Forgetting everything that hurts and ruins,
I wanted to twist myself to your piano tunes
making myself a pretty doll,
I always wanted to be the one you ever loved,
I always wanted to be with you
as your dream, as your feelings

With love........

Friday, November 20, 2009

ಕೋರಿಕೆ....

ಆಗಸವು ಕಣ್ಣೀರು ಸುರಿಸಿದೆ ನನ್ನ ಕಂಡು
ಕರಗುವುದು ಕಲ್ಲು ಮನಸು ಮರುಗಿ
ತಿಳಿಯಲಾರೆಯ ನನ್ನ ನೋವ
ಬರಲಾರೆಯ ಮತ್ತೆ
ಕಣ್ಣ ಚುಂಬಿಸಲು
ಹುಣ್ಣಿಮೆಯ ರಾತ್ರಿಯಲಿ....

Thursday, November 5, 2009

ಕರಿನೆರಳ ದಾಟಿ-- ನಾನು ಈ ಕವನಕ್ಕೆ ಕೊಡೊ ಮುನ್ನುಡಿ

ಬೆಳಕೆ,
ಸತ್ತರೂ ನಿನ್ನಂತೆ
ಮತ್ತೆ ತಿರು ತಿರುಗಿ ಹುಟ್ಟಿ
ಮತ್ಯಾವುದೋ ಕತ್ತಲೆಯೊಳಗೆ ಕರಗಿ
ತನ್ನತನ ಕಳೆದು
ತಿರುಗಿ ಬರಲಾಗದ ಭಾವದೊಳಗೆ
ಅಲ್ಲಲ್ಲೇ ನಲುಗಿ
ಕರಗುವ ಚಂದ್ರನ ಕತ್ತಲೆಯೊಳಗೆ
ಒಂದಾಗುವ ಹಾಗೇ
ಮತ್ತೆ ಅಂತ್ಯದ ಕಡೆಗೆ
ಎಳೆದು ತಂದಿದೆ ಈ ಬದುಕು
ಬೆಳಕ ಕೊಲ್ಲುವ ಹಾಗೇ............

Wednesday, November 4, 2009

ಮುಗಿಯದ ನಿರೀಕ್ಷೆ.............
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...

ಪಟ್ಟಾಗಿ ಕಾಡುವ ಕನಸುಗಳ ,
ಅಟ್ಟಾಡಿ ಓಡಿಸಿ,
ಅತ್ತಿತ್ತಲಾಗಿ ಕಿತ್ತಾಡುವ ನೆನಪುಗಳ,
ಮನದೊಳಗೆ ಹುದುಗಿಸಿ ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...

ಹಿಂಡಾಗಿ ಬರುವ ಮಂದಿಗಳ ನಡುವೆ
ತನ್ನಿಯನ ರೂಪವ ಹುಡುಕಿ ,
ಕೆದಕಿ ಕೊಂಕುವ ನೋವುಗಳಿಗೆ
ಪ್ರೀತಿ ಹೆಸರಿಡಿಸಿ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...


ಅವನ ಪ್ರತಿ ಮಾತು, ಪ್ರತಿ ರೂಪ
ಕಣ್ಣಲ್ಲೇ ಇರಿಸಿ
ಕಣ್ಣೀರ ಹೊರದಬ್ಬದೆ ಜತನವಾಗಿರಿಸಿ,
ಪ್ರೀತಿ ಕನವರಿಸಿ ,
ಲೋಕ ಕನಿಕರಿಸಿ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...!!!!!!!!!

Baredastu hariva bili hale nanu...
bidisabeku aliyada chitthara...
munde..
maduwego masanako...
tumbiduwe banna chiranthanwagi
ninna kanninali....
kaledu hoguwa munna.. nanna nenapugallannu elladaroo bachiduwase...