Wednesday, November 4, 2009

ಮುಗಿಯದ ನಿರೀಕ್ಷೆ.............
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...

ಪಟ್ಟಾಗಿ ಕಾಡುವ ಕನಸುಗಳ ,
ಅಟ್ಟಾಡಿ ಓಡಿಸಿ,
ಅತ್ತಿತ್ತಲಾಗಿ ಕಿತ್ತಾಡುವ ನೆನಪುಗಳ,
ಮನದೊಳಗೆ ಹುದುಗಿಸಿ ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...

ಹಿಂಡಾಗಿ ಬರುವ ಮಂದಿಗಳ ನಡುವೆ
ತನ್ನಿಯನ ರೂಪವ ಹುಡುಕಿ ,
ಕೆದಕಿ ಕೊಂಕುವ ನೋವುಗಳಿಗೆ
ಪ್ರೀತಿ ಹೆಸರಿಡಿಸಿ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...


ಅವನ ಪ್ರತಿ ಮಾತು, ಪ್ರತಿ ರೂಪ
ಕಣ್ಣಲ್ಲೇ ಇರಿಸಿ
ಕಣ್ಣೀರ ಹೊರದಬ್ಬದೆ ಜತನವಾಗಿರಿಸಿ,
ಪ್ರೀತಿ ಕನವರಿಸಿ ,
ಲೋಕ ಕನಿಕರಿಸಿ,
ಕಾದಿರುವಳು ರಾಧಾ ಕೃಷ್ಣ ಬರುವನೆಂದು..
ಅವಳಿಗೇನು ಗೊತ್ತು ಅವನು ಜಗದೊಡೆಯನೆಂದು...!!!!!!!!!

No comments:

Post a Comment