Saturday, April 10, 2010

ಹಾಗೇ ಒಂದಷ್ಟು ಹನಿಗಳು....

* ಸೂರ್ಯ ಮನೆಗೋಡಿದ;

ಹೂ ಮುದುಡಿತು.....

* ಬೆಳಕ ನೋಡಿ ಕತ್ತಲೆ ಓಡಿತು...

ಬೆಳಕೆಂದು ಓಡುವುದು?

* ಮನಸೆಂಬ ಕುದುರೆಗೆ

ಓಡುವುದೆ ಇಷ್ಟ....

* ಒಬ್ಬ ಪ್ರಸಿದ್ಧ ಕವಿಯ ಮನೆಗೆ ಹೋದಾಗ

ಕಂಡದ್ದು ಜೇಡರ ಬಲೆ, ಧೂಳು...

ಅದೊಂದು ಸಮುದ್ರ ತೀರ...
ಅವನು ನಡೆಯುತ್ತಿದ್ದ;
ಅವಳು ಬಂಡೆಯ ಮೇಲಿದ್ದಳು....
ಕಣ್ಣೋಟ ಬೆರೆಯಿತು....
ಪ್ರೀತಿ ಅರಳಿತು...
ಅವನ ಜೀವನ ಬದಲಾಯಿತು
ಜೊತೆಗೆ ಅವಳದೂ...
ಕೊನೆಗೊಂದು ದಿನ, ಅವಳೂ ಬದಲಾದಳು...
ಪುನಃ ಅದೇ ಸಮುದ್ರ ದಂಡೆ
ಅಲ್ಲಿ ಅವಳಿದ್ದಾಳೆ ;
ಅವನು ಮಾತ್ರ ಇಲ್ಲ.....

Friday, April 9, 2010

ಅವನು...
ನಾನು ಕವಿತೆ ಬರೆಯುತ್ತಿರಲಿಲ್ಲ ... ಆದರೆ ಅವನು ಬರೆಯುತಿದ್ದ.... ಕಣ್ಣಲ್ಲೇ ಚಿತ್ರ ಬಿಡಿಸಿ , ಮನಸಲ್ಲೇ ಕವನ ಗೀಚುತ್ತಿದ್ದ...
ಕಂಡ ಪ್ರತಿ ವಸ್ತುವಿನಲು ಕವಿತೆ ಕಾಣುತ್ತಿದ್ದ.. ಮೂಲೆಯ ಪದಗಳನ್ನು ಹೆಕ್ಕಿ ತಂದು ಕಲ್ಪನೆಯಾಗಿಸುತ್ತಿದ್ದ.. ನನ್ನ ಕನಸುಗಳಾಗಿ ಕಳುಹಿಸುತ್ತಿದ್ದ...
ನನ್ನ ಪ್ರತಿ ಮಾತನ್ನು ಶಬ್ದವಾಗಿಸಿದ..., ಪ್ರತಿ ನಗುವನ್ನು ಕಾಗದದೊಳಗೆ ಕೂಡಿಟ್ಟ...
ನನ್ನನ್ನೇ ಕವನವನ್ನಾಗಿಸಿದ...
ಮೀರದ ಅವನ ಮಾತು, ಮೌನ ನನ್ನನ್ನು ಅವನ ಪಂಜರದೊಳಗೆ ಒಯ್ದಿತ್ತು. ಬಂಧಿಯಾಗಿದ್ದೆ ನಾನು ಅದೃಶ್ಯ ಬಲೆಯೊಳಗೆ..
ಮಾನಸ ಬೇಲಿಯ ಮೀರಿ...
ನನಗೆ ಗೀಚಲು ಕಲಿಸಿದ್ದೂ ಅವನೇ...
ಕಲ್ಪನೆಯ ದಾರಿಯಲಿ ಅವನ ನೆರಳಾಗಿದ್ದೆ...
ಆಗ ಚೈತ್ರದ ಹೂಗಳು ಅರಳಿದ್ದು ನನಗೆ ಕಾಣಿಸಿತು, ನದಿಗಳ ಮೌನಕ್ಕೆ ಕಿವಿ ಸೋತಿತ್ತು, ಹಕ್ಕಿಯ ಮಾತಿಗೆ ತಲೆಯಾಡಿಸಿತ್ತು,
ಆಗಲೇ ಅನಿಸಿದ್ದು ಈ ಬದುಕು ಅದೆಸ್ತು ಸುಂದರ .
ಮೊದಲೆಲ್ಲಾ ನಾ ಬರಿ ಕೊರಡಾಗಿದ್ದೆ....
ನನ್ನನೊಂದು ಕೊಳಲಾಗಿಸಿದ , ಜೀವ ಸೆಲೆಯಾಗಿಸಿದ, ಬದುಕ ಒಲವಾಗಿಸಿದ...
ಬದುಕು ಕಟ್ಟುವ ಹವಣಿಕೆ ಅವನಲ್ಲಿತ್ತು...
ಕವನ ಕಟ್ಟಿದಷ್ಟು ಸುಲಭವಾಗಿರಲಿಲ್ಲ ಅದು...
ಕನಸಲ್ಲಿಯೂ ಮಾತಾಡಿದ , ಕವನಗಳ ಗೀಚಿದ
ಆದರೆ ಬಾಳ ಚಕ್ರ ಕಾಲ ಚಕ್ರದೊಳಗೆ ಸೇರಿತ್ತು..
ಬಳಲಿ ಬೆಂಡಾದ , ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದ...
ಕೊನೆಗೂ, ಅ ರವಿ ಕಾಣದ ಕವಿಯಾದ...
ಈಗಲೂ ಬರೆಯುತ್ತಾನೆ ಕವಿತೆ, ಗೀಚುತ್ತಾನೆ ಕವನ ....
ಮೀರಿ ಅವನ ಪರಿಧಿ ನನ್ನ ಮೂಲಕ..
ಅವನೊಂದು ನೆನಪು..
ನನ್ನ ಕವನಗಳ ಬೆಳಕು.......
ನಾನು ಗೀಚುವುದು ಅವನ ಆಸೆ, ಅವನ ಕನಸು...
ಗೀಚುತ್ತಿದ್ದೆ, ಗೀಚುತ್ತೇನೆ, ಗೀಚುತ್ತಲೇ ಇರುತ್ತೇನೆ ನಿರಂತರವಾಗಿ ....
ಅವನ ನೆನಪಿನೊಂದಿಗೆ...
ಅವನಿಗಾಗಿ....

ನಾವೆಲ್ಲಿದ್ದೇವೆ?

ಅಸಹಾಯಕ ಬದುಕಿನ ಕೊನೆಯಲ್ಲಿ,

ಸಂಸಾರ, ತಾಪತ್ರಯಗಳ ಸುಳಿಯಲ್ಲಿ,

ಮನ ನೊಂದು, ಮನೆ ಬೆಂದು

ಸೂರ್ಯ-ಚಂದ್ರಾದಿ ತಾರೆಗಳ

ಜೊತೆ ಬೆರೆತು,

ಮರಳಿ ಅವಲೋಕಿಸಿದಾಗ,

ನಾವೆಲ್ಲಿದ್ದೇವೆ?

ಪರಿಸರ-ಪಕ್ಷಿ ತೆರೆ ಬಿಟ್ಟು ಮರೆಗೆ ಜಾರಿದಂತೆ,

ಜ್ನ್ಯಾನ ಹೊಳೆ ಮೈ ತುಂಬಿ ಹರಿದಂತೆ,

ಪ್ರೀತಿ ಸುಧೆ ಮೃಗವಾಗಿ ಅಲೆದಂತೆ,

ಸಂಸ್ಕೃತಿ ಸಂಜೀವಿನಿಯಾದಂತೆ,

ಮರೀಚಿಕೆಯ ದಾರಿಯಲ್ಲಿ ನಿಂತಾಗ

ನಾವೆಲ್ಲಿದ್ದೇವೆ?

ಯೋಗಗಳು, ಭೋಗಗಳು ಜೀವನದ ಪಯಣದಲಿ,

ಜ್ನ್ಯಾನ ದೀಪ ಬೆಳಕನ್ನು ಬೀರುತ್ತಿದ್ದಾಗ,

ಬದುಕ ಅರ್ಥೆಸಿಕೊಂಡ ಅಹಂ ನಿಂತಾಗ

ಸಮಾಜದ, ಜನರ ಮಧ್ಯದಲ್ಲಿ

ಕಿವಿ ತೆರೆದು, ಕಣ್ಬಿಟ್ಟು

ನೋಡಿದಾಗ

ನಾವೆಲ್ಲಿದೇವೆ?

ಯುದ್ಧ ಕಣದಲ್ಲಿ, ವ್ಯಾಪಾರ ಮಾಡುವಾಗ,

ಬಿದ್ದ ಕಣ್ಣೀರಿನ ಜಾಗದಲ್ಲಿ,

ಜೀವ ಜೀವಕೆ ಮರಣ ಬಂದಾಗ

ಬಾಳಿನ ವಿಕೃತಿಗೆ ಬೆರಗಾಗಿ,

ಮರಳಿ ಅವಲೋಕಿಸಿದಾಗ ,

ನಾವೆಲ್ಲಿದ್ದೇವೆ?

ಸಾವಿರ ಕನಸುಗಳ , ಕಣ್ಣೀರುಗಳ,

ಆಶಯ, ಹರಕೆ , ಸಂತೋಷಗಳ

ಮುಖ ನೋಡಿ, ಆಸೆ ಪಟ್ಟು

ಪಡೆಯ ಬಯಸಿ,

ತಿರುಗಿ ನಡೆದಾಗ, ಆಶ್ಚರ್ಯ !!!!

ನಾವೆಲ್ಲಿದ್ದೇವೆ???

ಅನಿಸಿಕೆ ....

ದೇಶ - ವಿದೇಶಗಳ ನಡುವೆ ಸಿಲುಕಿರುವ

ಪರದೇಶಿಗೆ ಪ್ರಶ್ನಿಸಲಾಯಿತು

-" ದೇಶವೆಂದರೇನು? ದೇಶ ಪ್ರೇಮವೆಂದರೇನು ?"

ಅವನೆಂದ--

"ದೇಶವೆಂದರೆ ಶತ್ರುತ್ವ, ದೇಶ ಪ್ರೇಮವೆಂದರೆ ಯುದ್ಧ"

ಹಾಗಾದರೆ ಸಮಾಜವೆಂದರೇನು ?

"ಸಮಾಜವೆಂದರೆ ಡಾಮರೀಕರನಗೊಳ್ಳದ

ಒಣಕಲು ರಸ್ತೆ.."

'ನೀನ್ಯಾರು?'

'ಆ ರಸ್ತೆಯಲ್ಲಿ ನಡೆಯುವ ದಾರಿ ಹೋಕ '

Monday, February 8, 2010

ಕೃಷ್ಣ

ಸೆರೆಯಲ್ಲಿ ಜನಿಸಿ, ಗೋಕುಲ ಪ್ರವೇಶಿಸಿ ,
ದಟ್ಟ ನಡುರಾತ್ರಿ ಯಮುನೆ ಬಗೆದು,
ಯಶೋದೆಯ ಮಡಿಲು ತುಂಬಿ,
ಮನಸು ಹಿಂಡಿ ಕಹಿಯಾಗಿಸಿ ನಿನಗಾಗಿ
ಕಾದ ದೇವಕಿಯ ದುಃಖ ನೋಡದೆ ,
ಪೂತನಿಯ ಕೊಂದ ನಿನ್ನ ಬಾಲಲೀಲೆಗಳ
ಎಂತು ಬಣ್ಣಿಸಲಿ
ಬಕ, ಶುಕ, ಕಾಳಿಂಗನ ಲೆಕ್ಕಿಸದೆ
ಗೋವರ್ಧನ ಗಿರಿಯಡಿ ಆಶ್ರಯವಿತ್ತ ಆಶ್ರಯದಾತ ,
ಗೋಪಿಕೆಯರ ಕನಸಲ್ಲಿ, ಕುಳಿತಲ್ಲಿ ,ನಿಂತಲ್ಲಿ
ಮನಸಲ್ಲಿ ಸರ್ವವ್ಯಾಪಿಯಾದ ಕಳ್ಳ
ಕೃಷ್ಣ ನೀನು.....
ರಕ್ಕಸರ ಸೊಕ್ಕಿನಡಿ ಭೂ ಮಾತೆ ಸಿಲುಕಿರಲು
ಆ ಕ್ರೂರ ಕಂಸನ ಕೊಂದ
ಪುರುಷೋತ್ತಮ ನೀನು,
ಪಾಂಡವರ ಪರವಾಗಿ ಅತ್ತೆಯ ಮಕ್ಕಳನ್ನು ನಿರ್ನಾಮಗೊಳಿಸಿದ
ಶ್ರೀ ಕೃಷ್ಣ ಪರಮಾತ್ಮ ನೀನು
ಅಗ್ನಿ ಪುತ್ರಿಯಾದ ಪಾಂಚಾಲಿಯ ಮಾನ ಉಳಿಸಿ
ಪುರಾಣಗಳಲ್ಲಿ ಗೌರವ ಕಾಯ್ದಿರಿಸಿದ ಮಹಾಮುಕುಟ ನೀನು
ಪದಿನಾರು ಸಹಸ್ರ ಸ್ತ್ರೀಯರ ಕುಂಕುಮ ನೀನು
ಸ್ಥ್ರೀಲೋಲನೆನಿಸಿದ್ದರಲ್ಲಿ ಸಂದೇಹವೇನು?
ಮಾನವನ ಮಾಯೆ ಅತಿಯಾದಾಗ,
ಭಗವದ್ಗೀತಾ ಹಾಡಿ,
ಪಾರ್ಥನ ಯೋಧನಾಗಿಸಿದ್ದರಲ್ಲಿ,
ಸುಯೋಧನನ ದರ್ಪ ಶಮನಗೊಳಿಸಿದ್ದರಲ್ಲಿ,
ಬ್ರಹ್ಮಚಾರಿಯಾದ ನಿನ್ನ ಆಂತರ್ಯದ ಪರಿಭಾಷೆ
ನ್ಯಾಯ, ಧರ್ಮವಲ್ಲದೆ ಮತ್ತಿನ್ನೇನು ??
ಕಪಟಿ, ಮೋಸಗಾರ, ವಂಚನೆ ಹಾಗೂ ಸುಳ್ಳು
ನಾಟಕಗಳ ಸೂತ್ರಧಾರ ನೀನೆಂದು ಬಣ್ಣಿಸಿದ
ಜನರಲ್ಲಿ ಭಕ್ತಿಯ ಪ್ರೀತಿಯನ್ನು ಬಿತ್ತಿದ ...
ಹೇ .......
ಕೇಶವ , ಮಾಧವ, ವೇಣುಗೋಪಾಲ , ಮಧುಸೂಧನ
ಸ್ತ್ರೀಲೋಲ, ಜನಾರ್ಧನ, ದಶ ಜನ್ಮಗಳ ನೇತಾರ
ಕೃಷ್ನೋತ್ತಮ ನಿನ್ನನೆಂತು ನಾ ಬಣ್ಣಿಸಲಿ...........

Wednesday, December 2, 2009

Written on 07/09/2004

ದಿನವೂ ನಡೆಯುವ ದಾರಿಯಲ್ಲಿ,

ಒಂಟಿ ಮನೆಯ ಮುಂದೆ ಸುಂದರ

ರಂಗೋಲಿಯ ಕಂಡು ನಿಂತೆ;

ಅದರ ಎಳೆ ಎಳೆಯಲ್ಲೂ ಪ್ರೀತಿ ತುಂಬಿತ್ತು ,

ವಾತ್ಸಲ್ಯದ ರಂಗು ಮುಸುಕಿತ್ತು,

ಸುತ್ತಮುತ್ತಲೂ ನೋಡಿದೆ;

ಕಿಟಕಿ ಮುಚ್ಚಿತ್ತು !!!

ಮನೆಯೊಡತಿ ಕಾಣುವಳೇ................

ಹೀಗೆ...

ದಿನವೂ ಇದೇ ಪರಿಪಾಠ..

ರಂಗೋಲಿಯ ಸೌಂದರ್ಯ ಸವಿಯುವುದು...

ಒಡತಿಯ ಹುಡುಕುವುದು..

ಯಾರು ಕಾಣಲಿಲ್ಲ...

ಕಾಣಿಸುವುದೂ ಇಲ್ಲವೇನೋ????

ನಿನ್ನೆ.............

ಕಿಟಕಿ ತೆರೆದಿತ್ತು!!!!

ಆದರೆ ,

ರಂಗೋಲಿಯ ಬಣ್ಣ ಕಾಣಲಿಲ್ಲ,

ಗಂಧ ಸೂಸಲಿಲ್ಲ

ಬಹುಶಃ !!???

ಒಡತಿ ಇಲ್ಲವೇನೋ?????