Monday, February 8, 2010

ಕೃಷ್ಣ

ಸೆರೆಯಲ್ಲಿ ಜನಿಸಿ, ಗೋಕುಲ ಪ್ರವೇಶಿಸಿ ,
ದಟ್ಟ ನಡುರಾತ್ರಿ ಯಮುನೆ ಬಗೆದು,
ಯಶೋದೆಯ ಮಡಿಲು ತುಂಬಿ,
ಮನಸು ಹಿಂಡಿ ಕಹಿಯಾಗಿಸಿ ನಿನಗಾಗಿ
ಕಾದ ದೇವಕಿಯ ದುಃಖ ನೋಡದೆ ,
ಪೂತನಿಯ ಕೊಂದ ನಿನ್ನ ಬಾಲಲೀಲೆಗಳ
ಎಂತು ಬಣ್ಣಿಸಲಿ
ಬಕ, ಶುಕ, ಕಾಳಿಂಗನ ಲೆಕ್ಕಿಸದೆ
ಗೋವರ್ಧನ ಗಿರಿಯಡಿ ಆಶ್ರಯವಿತ್ತ ಆಶ್ರಯದಾತ ,
ಗೋಪಿಕೆಯರ ಕನಸಲ್ಲಿ, ಕುಳಿತಲ್ಲಿ ,ನಿಂತಲ್ಲಿ
ಮನಸಲ್ಲಿ ಸರ್ವವ್ಯಾಪಿಯಾದ ಕಳ್ಳ
ಕೃಷ್ಣ ನೀನು.....
ರಕ್ಕಸರ ಸೊಕ್ಕಿನಡಿ ಭೂ ಮಾತೆ ಸಿಲುಕಿರಲು
ಆ ಕ್ರೂರ ಕಂಸನ ಕೊಂದ
ಪುರುಷೋತ್ತಮ ನೀನು,
ಪಾಂಡವರ ಪರವಾಗಿ ಅತ್ತೆಯ ಮಕ್ಕಳನ್ನು ನಿರ್ನಾಮಗೊಳಿಸಿದ
ಶ್ರೀ ಕೃಷ್ಣ ಪರಮಾತ್ಮ ನೀನು
ಅಗ್ನಿ ಪುತ್ರಿಯಾದ ಪಾಂಚಾಲಿಯ ಮಾನ ಉಳಿಸಿ
ಪುರಾಣಗಳಲ್ಲಿ ಗೌರವ ಕಾಯ್ದಿರಿಸಿದ ಮಹಾಮುಕುಟ ನೀನು
ಪದಿನಾರು ಸಹಸ್ರ ಸ್ತ್ರೀಯರ ಕುಂಕುಮ ನೀನು
ಸ್ಥ್ರೀಲೋಲನೆನಿಸಿದ್ದರಲ್ಲಿ ಸಂದೇಹವೇನು?
ಮಾನವನ ಮಾಯೆ ಅತಿಯಾದಾಗ,
ಭಗವದ್ಗೀತಾ ಹಾಡಿ,
ಪಾರ್ಥನ ಯೋಧನಾಗಿಸಿದ್ದರಲ್ಲಿ,
ಸುಯೋಧನನ ದರ್ಪ ಶಮನಗೊಳಿಸಿದ್ದರಲ್ಲಿ,
ಬ್ರಹ್ಮಚಾರಿಯಾದ ನಿನ್ನ ಆಂತರ್ಯದ ಪರಿಭಾಷೆ
ನ್ಯಾಯ, ಧರ್ಮವಲ್ಲದೆ ಮತ್ತಿನ್ನೇನು ??
ಕಪಟಿ, ಮೋಸಗಾರ, ವಂಚನೆ ಹಾಗೂ ಸುಳ್ಳು
ನಾಟಕಗಳ ಸೂತ್ರಧಾರ ನೀನೆಂದು ಬಣ್ಣಿಸಿದ
ಜನರಲ್ಲಿ ಭಕ್ತಿಯ ಪ್ರೀತಿಯನ್ನು ಬಿತ್ತಿದ ...
ಹೇ .......
ಕೇಶವ , ಮಾಧವ, ವೇಣುಗೋಪಾಲ , ಮಧುಸೂಧನ
ಸ್ತ್ರೀಲೋಲ, ಜನಾರ್ಧನ, ದಶ ಜನ್ಮಗಳ ನೇತಾರ
ಕೃಷ್ನೋತ್ತಮ ನಿನ್ನನೆಂತು ನಾ ಬಣ್ಣಿಸಲಿ...........

4 comments: