Friday, April 9, 2010

ನಾವೆಲ್ಲಿದ್ದೇವೆ?

ಅಸಹಾಯಕ ಬದುಕಿನ ಕೊನೆಯಲ್ಲಿ,

ಸಂಸಾರ, ತಾಪತ್ರಯಗಳ ಸುಳಿಯಲ್ಲಿ,

ಮನ ನೊಂದು, ಮನೆ ಬೆಂದು

ಸೂರ್ಯ-ಚಂದ್ರಾದಿ ತಾರೆಗಳ

ಜೊತೆ ಬೆರೆತು,

ಮರಳಿ ಅವಲೋಕಿಸಿದಾಗ,

ನಾವೆಲ್ಲಿದ್ದೇವೆ?

ಪರಿಸರ-ಪಕ್ಷಿ ತೆರೆ ಬಿಟ್ಟು ಮರೆಗೆ ಜಾರಿದಂತೆ,

ಜ್ನ್ಯಾನ ಹೊಳೆ ಮೈ ತುಂಬಿ ಹರಿದಂತೆ,

ಪ್ರೀತಿ ಸುಧೆ ಮೃಗವಾಗಿ ಅಲೆದಂತೆ,

ಸಂಸ್ಕೃತಿ ಸಂಜೀವಿನಿಯಾದಂತೆ,

ಮರೀಚಿಕೆಯ ದಾರಿಯಲ್ಲಿ ನಿಂತಾಗ

ನಾವೆಲ್ಲಿದ್ದೇವೆ?

ಯೋಗಗಳು, ಭೋಗಗಳು ಜೀವನದ ಪಯಣದಲಿ,

ಜ್ನ್ಯಾನ ದೀಪ ಬೆಳಕನ್ನು ಬೀರುತ್ತಿದ್ದಾಗ,

ಬದುಕ ಅರ್ಥೆಸಿಕೊಂಡ ಅಹಂ ನಿಂತಾಗ

ಸಮಾಜದ, ಜನರ ಮಧ್ಯದಲ್ಲಿ

ಕಿವಿ ತೆರೆದು, ಕಣ್ಬಿಟ್ಟು

ನೋಡಿದಾಗ

ನಾವೆಲ್ಲಿದೇವೆ?

ಯುದ್ಧ ಕಣದಲ್ಲಿ, ವ್ಯಾಪಾರ ಮಾಡುವಾಗ,

ಬಿದ್ದ ಕಣ್ಣೀರಿನ ಜಾಗದಲ್ಲಿ,

ಜೀವ ಜೀವಕೆ ಮರಣ ಬಂದಾಗ

ಬಾಳಿನ ವಿಕೃತಿಗೆ ಬೆರಗಾಗಿ,

ಮರಳಿ ಅವಲೋಕಿಸಿದಾಗ ,

ನಾವೆಲ್ಲಿದ್ದೇವೆ?

ಸಾವಿರ ಕನಸುಗಳ , ಕಣ್ಣೀರುಗಳ,

ಆಶಯ, ಹರಕೆ , ಸಂತೋಷಗಳ

ಮುಖ ನೋಡಿ, ಆಸೆ ಪಟ್ಟು

ಪಡೆಯ ಬಯಸಿ,

ತಿರುಗಿ ನಡೆದಾಗ, ಆಶ್ಚರ್ಯ !!!!

ನಾವೆಲ್ಲಿದ್ದೇವೆ???

No comments:

Post a Comment